21
ಜನವರಿ
ಮುಂಗಾರು ಬೆಳೆಗಳ ಮೇಲೆ ಕಳೆ ಮತ್ತು ಪೋಷಕಾಂಶಗಳ ನಿರ್ವಹಣೆಯ ಪರಿಣಾಮ
21 ಜನವರಿ 2022 | Admin

ಸಮರ್ಪಕ ಸಸ್ಯ ಪೋಷಣೆಯು ಬೆಳೆಗಳು ಸಮೃದ್ಧ ಬೆಳೆಯಲು ಮತ್ತು ಹೆಚ್ಚಿನ ಇಳುವರಿಯನ್ನು ನೀಡಲು ಸಹಾಯ ಮಾಡುವ ಪ್ರಮುಖ ಅಂಶವಾಗಿದೆ.

ಹೆಚ್ಚಿನ-ಇಳುವರಿ ನೀಡುವ ಬೆಳೆಗಳಿಗೆ ಪ್ರಮುಖ ಕೊಡುಗೆ ನೀಡುವ ಸಸ್ಯ ಪೋಷಣೆಯು ಕಳೆ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿಯೂ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಕಳೆಗಳು ಮುಖ್ಯ ಬೆಳೆಗಳ ಉದ್ದಕ್ಕೂ ಬೆಳೆಯುವ ಮತ್ತು ಅವುಗಳ ಪೋಷಣೆಯನ್ನು ಕಸಿದುಕೊಳ್ಳುವ ಅನಗತ್ಯ ಸಸ್ಯಗಳಾಗಿವೆ.

ಕಳೆಗಳು ಸಾಮಾನ್ಯವಾಗಿ ಸಮಯ ಮತ್ತು ಸ್ಥಳವನ್ನು ಗಣನೆಗೆ ತೆಗೆದುಕೊಳ್ಳದೆ ಬೆಳೆಯುವ ಸಸ್ಯಗಳಾಗಿವೆ.

ಕಳೆ ಮತ್ತು ಪೋಷಕಾಂಶಗಳ ನಿರ್ವಹಣೆಯ ಪ್ರಾಮುಖ್ಯತೆ

ಕಳೆಗಳು ತಮ್ಮ ಆರಂಭಿಕ ಬೆಳವಣಿಗೆಯ ಹಂತಗಳಲ್ಲಿ, <189> ಬೆಳೆಗಳಿಗಿಂತ ಹೆಚ್ಚಿನ ಪೋಷಕಾಂಶಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ ಎಂದು ಅಧ್ಯಯನಗಳು ಸೂಚಿಸುತ್ತವೆ.

ಅವು ಪೋಷಣೆಗಾಗಿ ಬೆಳೆಯೊಂದಿಗೆ ಪೈಪೋಟಿ ನಡೆಸುವುದು ಮಾತ್ರವಲ್ಲದೆ, ಕೀಟಗಳು ಮತ್ತು ರೋಗಗಳಿಗೆ ಸಂತಾನೋತ್ಪತ್ತಿಯ ಆಶ್ರಯಿತ ಸ್ಥಳವಾಗಿ ಕಾರ್ಯನಿರ್ವಹಿಸುತ್ತವೆ.

ಇದಲ್ಲದೆ, ಅವು ವಾಸ್ತವವಾಗಿ ಬೆಳೆಗಳಿಗೆ ಹೋಲಿಸಿದರೆ ಅನೇಕ ಸಸ್ಯ ಪೋಷಕಾಂಶಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಬಲ್ಲವು.

ಮಣ್ಣಿನಲ್ಲಿರುವ ಪೋಷಕಾಂಶವನ್ನು ಬರಿದಾಗಿಸುವ ಕಳೆಗಳ ಬೆಳವಣಿಗೆಯು ವಾಸ್ತವವಾಗಿ ಬೆಳೆಯ ಇಳುವರಿಯ ಮೇಲೆ ಪರಿಣಾಮ ಬೀರಬಹುದು.

ಅಲ್ಲದೆ, ಅಂತಿಮ ಉತ್ಪನ್ನದಲ್ಲಿ ಕಳೆ ಬೀಜಗಳ ಉಪಸ್ಥಿತಿಯು ಬೆಳೆಯ ವಾಣಿಜ್ಯ ಮೌಲ್ಯವನ್ನು ಕಡಿಮೆ ಮಾಡುತ್ತದೆ, ಆ ಮೂಲಕ ಇದು ರೈತರ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.

ಕಳೆಗಳ ಉಪಸ್ಥಿತಿ ಬೆಳೆಗಳ ಇಳುವರಿ ಕಡಿಮೆಯಾಗುವುದು ಮಾತ್ರವಲ್ಲದೆ ಉತ್ಪಾದನಾ ವೆಚ್ಚವನ್ನು ಹೆಚ್ಚಿಸುತ್ತವೆ,

ಉತ್ಪನ್ನದ ಗುಣಮಟ್ಟವನ್ನು ಕಡಿಮೆ ಮಾಡುತ್ತವೆ ಮತ್ತು ಕೊಯ್ಲಿನ ಸಮಯದಲ್ಲಿ ಅಡಚಣೆ ಮಾಡುತ್ತವೆ.

ಇದಲ್ಲದೆ, ಅವು ಜಮೀನಿನಲ್ಲಿ ನೀರಿನ ಹರಿವಿಗೆ ಅಡ್ಡಿಯುಂಟುಮಾಡುತ್ತವೆ, ಕೀಟನಾಶಕಗಳ ಬಳಕೆಗೆ ಅಡ್ಡಿಪಡಿಸುತ್ತವೆ ಮತ್ತು ರೋಗವನ್ನು ಉಂಟುಮಾಡುವ ಜೀವಿಗಳಿಗೆ ಆಶ್ರಯ ಒದಗಿಸುತ್ತವೆ.

ಆದ್ದರಿಂದ, ಬೆಳೆಗಳು ಆರೋಗ್ಯಕರವಾಗಿ ಬೆಳೆದು ಹೆಚ್ಚಿನ ಇಳುವರಿಯನ್ನು ನೀಡಲು, ಪೋಷಕಾಂಶಗಳು ಬೆಳೆಗಳಿಗೆ ದೊರೆಯಬೇಕು ಹೊರತು ಕಳೆಗಳಿಗೆ ಅಲ್ಲ.

ಇಲ್ಲಿಯೇ ಕಳೆಗಳ ನಿರ್ವಹಣೆಯು ಪ್ರಮುಖ ಪಾತ್ರವಹಿಸುತ್ತದೆ.

ಸಮರ್ಪಕ ಕಳೆ ನಿರ್ವಹಣೆಯು ಬೆಳೆಗಳಿಗೆ ಆರ್ಥಿಕ ಅಥವಾ ಸಾವಯವ ಹಾನಿಯನ್ನುಂಟು ಮಾಡದ ರೀತಿಯಲ್ಲಿ ಕಳೆಗಳ ಪ್ರಮಾಣ ಮತ್ತು ಬೆಳವಣಿಗೆಯನ್ನು ನಿಯಂತ್ರಿಸುವುದನ್ನು ಒಳಗೊಂಡಿರುತ್ತದೆ

ಬೆಳೆಗಳಿಗೆ ಅದರ ಇಳುವರಿ ಸಾಮರ್ಥ್ಯವನ್ನು ತಲುಪಲು ಸಹಾಯ ಮಾಡುವುದರ ಮೂಲಕ ಸಮರ್ಪಕವಾಗಿ ಕಳೆ ನಿರ್ವಹಣೆ ಮಾಡುವುದು, ಹೆಚ್ಚಿನ ಸಂಖ್ಯೆಯ ಜನರು ಬೆಳೆ ಬೆಳೆಯಲು ಸೀಮಿತ ಸಂಪನ್ಮೂಲಗಳು ಮತ್ತು ಕೃಷಿ ಭೂಮಿಯನ್ನು ಅವಲಂಬಿಸಿರುವ ಪರಿಸ್ಥಿತಿಯಲ್ಲಿ ಹೆಚ್ಚು ಮುಖ್ಯವಾಗಿರುತ್ತದೆ .

ಕಳೆ ನಿರ್ವಹಣೆಯ ಪರಿಣಾಮ

ನಿಧಾನವಾಗಿ, ಸ್ಥಿರವಾಗಿ ಮತ್ತು ಕಣ್ಣಿಗೆ ಕಾಣಿಸದ ರೀತಿಯಲ್ಲಿ, ಕಳೆಗಳು ತಮ್ಮ ಹಾನಿಕಾರಕ ಪರಿಣಾಮಗಳನ್ನು ಬೆಳೆಗಳಿಗೆ ವಿಸ್ತರಿಸುತ್ತವೆ ಮತ್ತು ಅವುಗಳು ಉಂಟುಮಾಡುವ ಬದಲಾವಣೆಗಳನ್ನು ಬಹುತೇಕ ಸರಿಪಡಿಸಲಾಗುವುದಿಲ್ಲ.

ಕಳೆ ನಿರ್ವಹಣೆಯ ಒಟ್ಟಾರೆ ಪರಿಣಾಮ ಮತ್ತು ಅದರ ಕೊರತೆಯನ್ನು ವಿವರವಾಗಿ ನೋಡೋಣ.

- ನಿರ್ಬಂಧಗಳಿಲ್ಲದೆ, ಕಳೆಗಳು ಪೋಷಕಾಂಶಗಳಿಗಾಗಿ ಬೆಳೆಗಳೊಂದಿಗೆ ಪೈಪೋಟಿ ನಡೆಸುತ್ತವೆ, ಇದರಿಂದಾಗಿ ಇಳುವರಿಯಲ್ಲಿ ಗಣನೀಯ ಇಳಿಕೆ ಕಂಡುಬರುತ್ತದೆ.

ಆದರೆ ಸಮರ್ಪಕವಾಗಿ ಕಳೆ ನಿರ್ವಹಣೆ ಮಾಡುವುದರಿಂದ, ಬೆಳೆಗಳು ಅಗತ್ಯವಿರುವ ಪೌಷ್ಟಿಕಾಂಶವನ್ನು ಪಡೆಯುತ್ತವೆ ಮತ್ತುಇಳುವರಿಯ ಇಳಿಕೆಯನ್ನು ತಪ್ಪಿಸಬಹುದು.

- ನೀರಾವರಿಯ ಅಗತ್ಯವನ್ನು ಹೆಚ್ಚಿಸುವ ಮೂಲಕ ಕಳೆಗಳು ವ್ಯವಸಾಯದ ವೆಚ್ಚವನ್ನು ಹೆಚ್ಚಿಸುತ್ತವೆ ಮತ್ತು ಕೆಲಸದ ಪ್ರಗತಿಗೆ ಅಡ್ಡಿಯಾಗುತ್ತವೆ.

ಸಮಯೋಚಿತ ಕಳೆ ನಿರ್ವಹಣೆಯು ವ್ಯವಸಾಯದ ವೆಚ್ಚದೊಂದಿಗೆ ನೀರಾವರಿಯ ಅಗತ್ಯಗಳನ್ನು ತೀವ್ರವಾಗಿ ಕಡಿಮೆ ಮಾಡುತ್ತದೆ.

- ಕಳೆ ನಿರ್ವಹಣೆಯ ಕೊರತೆಯು ಕಳೆಗಳ ಬೆಳವಣಿಗೆಗೆ ಕಾರಣವಾಗುತ್ತದೆ, ಮತ್ತು ಅವುಗಳ ಉಪಸ್ಥಿತಿಯು ಮಿಶ್ರ ಪರಾಗಸ್ಪರ್ಶಕ್ಕೆ ಅವಕಾಶ ಮಾಡಿಕೊಡುವ ಮೂಲಕ ಪ್ರಭೇದಗಳ ಶುದ್ಧತೆಗೆ ಧಕ್ಕೆಯುಂಟುಮಾಡುತ್ತದೆ.

ಇದನ್ನು ಸಮಯೋಚಿತ ಕಳೆ ನಿರ್ವಹಣೆಯ ಮೂಲಕ ತಪ್ಪಿಸಬಹುದು.

ಬೆಳೆ ತಳಿಗಳ ಶುದ್ಧತೆಯನ್ನೂ ಸಹ ಈ ರೀತಿಯಲ್ಲಿ ಉಳಿಸಿಕೊಳ್ಳಬಹುದು.

ಕಳೆ ನಿಯಂತ್ರಣದ ವಿವಿಧ ವಿಧಾನಗಳು

ಜಮೀನುಗಳಲ್ಲಿ ಕಳೆಗಳ ಬೆಳವಣಿಗೆಯನ್ನು ನಿಯಂತ್ರಿಸಲು ಮತ್ತು ತಗ್ಗಿಸಲು ರೈತರು ವೈವಿಧ್ಯಮಯ ತಂತ್ರಗಳನ್ನು ಒಳಗೊಂಡಿರುವ ವಿವಿಧ ಸಮಗ್ರ ವಿಧಾನಗಳ ಶ್ರೇಣಿಯನ್ನು ಬಳಸುತ್ತಾರೆ.

ಈ ಸಮಸ್ಯೆಯನ್ನು ನಿಭಾಯಿಸಲು ಅತ್ಯಂತ ಹಳೆಯ ಮತ್ತು ಅತ್ಯಂತ ಪ್ರಾಚೀನ ಮಾರ್ಗವೆಂದರೆ ಕೈಯಿಂದ ತೆಗೆಯುವದು.

ಇಂದು ಹೆಚ್ಚಿನ ರೈತರು ಕಳೆ ನಿಯಂತ್ರಣದ ವಿವಿಧ ವಿಧಾನಗಳನ್ನು ಅವಲಂಬಿಸಿದ್ದಾರೆ, ಅವುಗಳೆಂದರೆ:

- ಬೆಳೆಯದಂತೆ ತಡೆಗಟ್ಟುವ ಕಳೆ ನಿಯಂತ್ರಣ,

- ಸಾಂಪ್ರದಾಯಿಕ ಕಳೆ ನಿಯಂತ್ರಣ,

- ಯಾಂತ್ರಿಕ ಕಳೆ ನಿಯಂತ್ರಣ,

- ಜೈವಿಕ ಕಳೆ ನಿಯಂತ್ರಣ ಮತ್ತು

- ರಾಸಾಯನಿಕ ಕಳೆ ನಿಯಂತ್ರಣ.

ಮೇಲೆ ತಿಳಿಸಲಾದ ಎಲ್ಲವೂ ಕಳೆಗಳ ಬೆಳವಣಿಗೆಯನ್ನು ನಿಯಂತ್ರಿಸುವ ವಿಧಾನಗಳಾಗಿವೆ.

ಆದಾಗ್ಯೂ, ಸುಸ್ಥಿರ ಮತ್ತು ಸಾವಯವ ಕೃಷಿಗಯಲ್ಲಿ ಕಳೆ ನಿಯಂತ್ರಣ ವಿಧಾನದ ಬಗ್ಗೆ ಗಾಢವಾಗಿ ಮರುಪರಿಶೀಲನೆ ಮಾಡುವುದು ಅಗತ್ಯವಿರುತ್ತದೆ ಏಕೆಂದರೆ ರಾಸಾಯನಿಕಗಳ ಉಳಿಕೆಗಳು ಮಾನವ ಮತ್ತು ಪ್ರಕೃತಿ ಎರಡಕ್ಕೂ ಹಾನಿಯುಂಟುಮಾಡಬಹುದು.

ಅಲ್ಲದೆ, ಇಂದು ಜನರು ಸಾವಯವ ಕೃಷಿಯ ಬಗ್ಗೆ ಹೆಚ್ಚು ಜಾಗೃತರಾಗಿದ್ದಾರೆ ಮತ್ತು ಅದರ ಪ್ರಯೋಜನಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದಾರೆ.

ಅಂತಹ ಎಲ್ಲಾಅಂಶಗಳು ಮತ್ತು ಹೆಚ್ಚಿನವು, ಕಳೆಗಳನ್ನು ನಿಯಂತ್ರಿಸಲು ಜೈವಿಕ ಕಳೆ ನಿರ್ವಹಣೆಯನ್ನು ಒಂದು ಗಮನಾರ್ಹ ಸಾಧನವನ್ನಾಗಿ ಮಾಡುತ್ತದೆ.

ಜೈವಿಕ ಕಳೆ ನಿರ್ವಹಣೆ

ಪ್ರಕೃತಿಯು ಮನುಕುಲದ ಹಲವಾರು ಸಮಸ್ಯೆಗಳಿಗೆ ವಿವಿಧ ಪರಿಹಾರಗಳ ಭಂಡಾರವಾಗಿದೆ.

ಜೈವಿಕ ಕಳೆ ನಿರ್ವಹಣೆಯು ಅಂತಹ ಒಂದು ಪರಿಣಾಮಕಾರಿ ಪರಿಹಾರವಾಗಿದೆ.

ಇದು ಕಳೆಗಳ ಸಂಖ್ಯೆಯನ್ನು ನಿರ್ವಹಿಸಲು ಅಥವಾ ನಿಗ್ರಹಿಸಲು ಪ್ರಕೃತಿಯ ವಸ್ತುಗಳನ್ನು ಬಳಸಿಕೊಳ್ಳುವ ಪರಿಕಲ್ಪನೆಯ ಬಗ್ಗೆ ತಿಳಿಸುತ್ತದೆ.

ಇದು ಕಳೆಗಳ ಶತ್ರುಗಳನ್ನು ಅವುಗಳ ಆವಾಸಸ್ಥಾನಗಳಲ್ಲಿ ಬಳಸುವುದನ್ನು ಒಳಗೊಂಡಿರುತ್ತದೆ.

ಜೈವಿಕ ಕಳೆ ನಿರ್ವಹಣೆಯ ಮತ್ತೊಂದು ಉತ್ತಮ ಉದಾಹರಣೆಯೆಂದರೆ ಕೆಲವು ಜಾತಿಯ ಕಳೆಗಳ ಮೇಲೆ ದಾಳಿ ಮಾಡುವ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳಂತಹ ರೋಗಕಾರಕ ಜೀವಿಗಳನ್ನು ಜಮೀನಿಗೆ ಬಿಡುವುದಾಗಿದೆ.

ಜಮೀನಿಗೆ ಜೈವಿಕ ಏಜೆಂಟ್‌ಗಳ ಸಮಯೋಚಿತ ಬಿಡುಗಡೆಯು ಸಮಸ್ಯೆಯನ್ನು ಸರಳ ಮತ್ತು ಪರಿಸರ-ಸ್ನೇಹಿ ರೀತಿಯಲ್ಲಿ ನಿಭಾಯಿಸಲು ಸಹಾಯ ಮಾಡುತ್ತದೆ.

ಕೀಟ ನಿರ್ವಹಣಾ ತಂತ್ರಜ್ಞಾನಗಳು

ಕೀಟ ನಿರ್ವಹಣಾ ತಂತ್ರಜ್ಞಾನಗಳೆಂದರೆ ಸಾವಯವ ಗೊಬ್ಬರಗಳಾದ ಸೆಗಣಿ ಗೊಬ್ಬರ ಅಥವಾ ಹಸಿರೆಲೆ ಗೊಬ್ಬರ ಅಥವಾ ಆಯಿಲ್‌ ಕೇಕ್‌ಗಳನ್ನು ಮಣ್ಣಿಗೆ ಸೇರಿಸುವುದು, ಮಣ್ಣಿನಲ್ಲಿ ಕೀಟ-ವಿರೋಧಿ ಸೂಕ್ಷ್ಮಾಣುಜೀವಿಗಳನ್ನು ಹೆಚ್ಚಿಸುವುದು.

ಕೀಟ-ವಿರೋಧಿ ಸೂಕ್ಷ್ಮಾಣುಜೀವಿಗಳ ನಿರಂತರ ಉತ್ಪತ್ತಿಯು ಮಣ್ಣಿನಿಂದ ಹರಡುವ ಸಸ್ಯ ರೋಗಕಾರಕಗಳ ಸಂಖ್ಯೆಯನ್ನು ಮತ್ತು ಅವುಗಳಿಂದ ಉಂಟಾಗುವ ರೋಗಗಳನ್ನು ಕಡಿಮೆ ಮಾಡುತ್ತದೆ.

ಅಷ್ಟೇ ಅಲ್ಲದೆ ಇದು ಕೀಟಗಳು ಮತ್ತು ರೋಗಗಳ ದಾಳಿಯನ್ನು ವಿರೋಧಿಸಲು ಸಸ್ಯವನ್ನು ಬಲಪಡಿಸುತ್ತದೆ.

ಕ್ರಿಶ್-ಇ ಯ ವಿಶೇಷ ಸೇವೆಗಳು

ಕ್ರಿಶ್-ಇ ಕೃಷಿ ಸಲಹಾ ಸೇವೆಗಳು

ಕ್ರಿಶ್-ಇ ಅಪ್ಲಿಕೇಶನ್ ಅಥವಾ ತಕ್ನೀಕ್ ಪ್ಲಾಟ್ ಅಪ್ಲಿಕೇಶನ್ ಮೂಲಕ ಕೃಷಿ ಸಲಹಾ ಸೇವೆಗಳು ಹಾಗೂ ಯಾವುದೇ ಕ್ರಿಶ್ -ಇ ಪ್ರತಿನಿಧಿಯ ಆನ್-ಫೀಲ್ಡ್ ಭೇಟಿಯು ಕಳೆ ಮತ್ತು ಪೋಷಕಾಂಶಗಳ ನಿರ್ವಹಣೆಗಾಗಿ ರೈತರಿಗೆ ಸಕಾಲಿಕ ಮಾಹಿತಿಯನ್ನು ಒದಗಿಸುತ್ತದೆ.

ಬೆಳೆ ಮತ್ತು ಕಳೆಗಳ ಸರಿಯಾದ ಹಂತದಲ್ಲಿ ಕಳೆ ನಿರ್ವಹಣೆಗೆ ಮೊಳಕೆ ಪೂರ್ವ ಕಳೆನಾಶಕ ಮತ್ತು ಮೊಳಕೆ ನಂತರದ ಕಳೆನಾಶಕಗಳನ್ನು ಹೇಗೆ ಬಳಸಬೇಕು ಎಂಬುದನ್ನು ಈ ಸಲಹೆಗಳು ಒಳಗೊಂಡಿರುತ್ತವೆ.

ಸುಸ್ಥಿರ ಕಳೆ ನಿರ್ವಹಣೆಗಾಗಿ ಸರಿಯಾದ ಸಮಯದಲ್ಲಿ ಎಡೆ ಹೊಡೆಯುವದು ಮತ್ತು ಕೈಯಿಂದ ಕಳೆ ಕೀಳುವುದು ಮುಂತಾದ ಅಂತರ್-ಬೇಸಾಯ ಚಟುವಟಿಕೆಗಳನ್ನೂ ಈ ಸಲಹಾ ಸೇವೆಗಳು ಒಳಗೊಂಡಿರುತ್ತವೆ.

ಕ್ರಿಶ್-ಇ ಯ ಸಲಹಾ ಸೇವೆಗಳು ಮಣ್ಣಿನ-ಪರೀಕ್ಷೆಯನ್ನು ಆಧರಿಸಿದ ಪೋಷಕಾಂಶಗಳ ಸಲಹೆಗಳನ್ನು ಸಹ ಒಳಗೊಂಡಿರುತ್ತವೆ, ಇದು ಸಾವಯವ ಗೊಬ್ಬರಗಳು, ರಾಸಾಯನಿಕ ಗೊಬ್ಬರಗಳು, ಜೈವಿಕ ಗೊಬ್ಬರಗಳು ಮುಂತಾದ ಅಗತ್ಯ ವಸ್ತುಗಳ ಖರೀದಿಯನ್ನು ಯೋಜಿಸಲು ರೈತರಿಗೆ ಸಹಾಯ ಮಾಡುತ್ತದೆ. ಯಾವುದೇ ರಸಗೊಬ್ಬರಗಳ ಅತಿಯಾದ ಬಳಕೆಯನ್ನು ತಪ್ಪಿಸಲು ಶಿಫಾರಸು ಮಾಡಿದ ಸಮಯಾವಧಿಯಲ್ಲಿ ಪೋಷಕಾಂಶಗಳ ಸಮತೋಲಿತ ಬಳಕೆಯಲ್ಲಿಯೂ ಕ್ರಿಶ್ -ಇ ಯ ಸಲಹಾ ಸೇವೆಗಳು ರೈತರಿಗೆ ಸಹಾಯ ಮಾಡುತ್ತವೆ.

ಕ್ರಿಶ್-ಇ ಯ ಬಾಡಿಗೆ ಸೇವೆಗಳು

ಕ್ರಿಶ್-ಇ ಸಣ್ಣ ಉಪಕರಣಗಳು, ಟಿಲ್ಲರ್‌ಗಳು ಅಥವಾ ಸಣ್ಣ ಟ್ರ್ಯಾಕ್ಟರ್ ಚಾಲಿತ ರೋಟವೇಟರ್‌ಗಳನ್ನು ಒಳಗೊಂಡಂತೆ ಕೃಷಿ ಉಪಕರಣಗಳನ್ನು ಬಾಡಿಗೆಗೆ ಒದಗಿಸುತ್ತದೆ, ಇವುಗಳನ್ನು ಸಾಮಾನ್ಯವಾಗಿ ವ್ಯಾಪಕ ಅಂತರದಲ್ಲಿ ಬೆಳೆಸುವ ಬೆಳೆಗಳಾದ ಹತ್ತಿ ಮತ್ತು ಕಬ್ಬಿನ ಕಳೆ ನಿರ್ವಹಣೆಗೆ ಬಳಸಲಾಗುತ್ತದೆ.

ಇದು ಕಳೆಗಳ ಪೈಪೋಟಿಯನ್ನು ಕಡಿಮೆ ಮಾಡುತ್ತದೆ ಮತ್ತು ಅವುಗಳಿಂದ ಉಂಟಾಗುವ ನಂತರದ ನಷ್ಟವನ್ನು ಕಡಿಮೆ ಮಾಡುತ್ತದೆ.