21
ಜನವರಿ
ಕಳೆಗಳ ವಿರುದ್ಧ ಹೋರಾಡುವುದಕ್ಕಾಗಿ ಬೆಳೆಯ ಪೋಷಣೆಯನ್ನು ಹೊಂದಿಸುವುದು
21 ಜನವರಿ 2022 | Admin

ಹೆಚ್ಚುತ್ತಿರುವ ಜನಸಂಖ್ಯೆಗೆ ಆಹಾರ ಭದ್ರತೆಯ ಜೊತೆಗೆ ಪರಿಸರ-ಸ್ನೇಹಿ ರೀತಿಯಲ್ಲಿ ಬೆಳೆಗಳ ಉತ್ಪಾದಕತೆಯನ್ನು ಹೆಚ್ಚಿಸುವುದು ಕೃಷಿ ವಿಜ್ಞಾನಿಗಳು ಮತ್ತು ರೈತರು ಪ್ರಪಂಚದಾದ್ಯಂತ ಎದುರಿಸುತ್ತಿರುವ ಪ್ರಮುಖ ಸವಾಲಾಗಿದೆ.

ಕಳೆಗಳು ಮತ್ತು ಪೋಷಕಾಂಶಗಳೆಂದರೇನು?

ಕಳೆಗಳೆಂದರೆ ಜಮೀನಿನಲ್ಲಿರುವ ಅನಗತ್ಯ ಸಸ್ಯಗಳು.

ಡಾರ್ವಿನ್‌ನ ಸಮರ್ಥರ ಉಳಿವಿನ ಸಿದ್ಧಾಂತವು ನಮಗೆ ತಿಳಿದಿದೆ, ಕಳೆಗಳು ಮಣ್ಣಿನ ತೇವಾಂಶ, ಪೋಷಕಾಂಶಗಳನ್ನು ಕಸಿದುಕೊಳ್ಳುವುದರಿಂದ ಹಾಗೂ ಮುಖ್ಯ ಬೆಳೆ ಸರಿಯಾಗಿ ಮತ್ತು ಆರೋಗ್ಯಪೂರ್ಣವಾಗಿ ಬೆಳೆಯಲು ಅಡ್ಡಿಪಡಿಸುವುದರಿಂದ, ಅವು ಖಂಡಿತವಾಗಿಯೂ ಕೃಷಿ ಪರಿಸರ ವ್ಯವಸ್ಥೆಯಲ್ಲಿ ಅನಪೇಕ್ಷಿತ ಭಾಗಗಳಾಗಿವೆ.

ಪೋಷಕಾಂಶಗಳೆಂದರೆ ಸಸ್ಯಗಳು ಮತ್ತು ಭೂಮಿಯ ಮೇಲಿನ ಎಲ್ಲಾ ಜೀವಿಗಳ ಆರೋಗ್ಯಕರ ಬೆಳವಣಿಗೆಯನ್ನು ಬೆಂಬಲಿಸುವ ಅತ್ಯಗತ್ಯ ಅಂಶಗಳಾಗಿವೆ.

ಸಸ್ಯದ ಬೇರುಗಳು ಮಣ್ಣಿನಿಂದ ನೀರು ಮತ್ತು ಆಮ್ಲಜನಕದ ಜೊತೆಗೆ ಪೋಷಕಾಂಶಗಳನ್ನು ಹೀರಿಕೊಳ್ಳುತ್ತವೆ.

ಅಜೈವಿಕ ಮತ್ತು ಸಾವಯವ ಕೃಷಿ ಎರಡರಲ್ಲೂ ಸುಸ್ಥಿರ ಕೃಷಿಗಾಗಿ ಬೆಳೆ ಉತ್ಪಾದನೆಗೆ ಪೋಷಕಾಂಶಗಳ ನಿರ್ವಹಣೆಯು ನಿರ್ಣಾಯಕ ಮತ್ತು ಅತ್ಯಗತ್ಯವಾಗಿದೆ.

ಪೋಷಕಾಂಶಗಳ ವಿಧಗಳು

ಸಸ್ಯಗಳಿಗೆ ಅವುಗಳ ಬೆಳವಣಿಗೆಗೆ ವಿಭಿನ್ನ ಪೋಷಕಾಂಶಗಳು ಬೇಕಾಗುತ್ತವೆ ಮತ್ತು ಎರಡು ರೀತಿಯ ಪೋಷಕಾಂಶಗಳಿವೆ - ಮ್ಯಾಕ್ರೋ ಮತ್ತು ಮೈಕ್ರೋ ಪೋಷಕಾಂಶಗಳು.

ಸಾರಜನಕ, ರಂಜಕ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಸಲ್ಫರ್ ಮುಂತಾದ ಮ್ಯಾಕ್ರೋ ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುತ್ತವೆ ಮತ್ತು ಅವು ಜೀವಕೋಶಗಳು, ಕಾಂಡಗಳು, ಧಾನ್ಯಗಳು ಮತ್ತು ಹಣ್ಣುಗಳ ಉತ್ಪತ್ತಿಯಲ್ಲಿ ಬಳಸಲ್ಪಡುತ್ತವೆ. ಆದರೆ ಬೋರಾನ್, ಜಿಂಕ್, ಕಾಪರ್, ಮ್ಯಾಂಗನೀಸ್ ಮತ್ತು ಐರನ್ ಮುಂತಾದ ಸೂಕ್ಷ್ಮ ಪೋಷಕಾಂಶಗಳು ಕಡಿಮೆ ಪ್ರಮಾಣದಲ್ಲಿ ಬೇಕಾಗುತ್ತವೆ. ಮತ್ತು ಅವು ದೈಹಿಕ ಮತ್ತು ಚಯಾಪಚಯ ಕ್ರಿಯೆಗಳಿಗೆ ಬಳಸಲ್ಪಡುತ್ತವೆ.

ಒಟ್ಟಾರೆಯಾಗಿ ಒಂದು ಸಸ್ಯಕ್ಕೆ ಅದರ ಜೀವನ ಚಕ್ರ ಮತ್ತು ಬೆಳವಣಿಗೆಯನ್ನು ಪೂರ್ಣಗೊಳಿಸಲು 17 ಅಗತ್ಯ ಪೋಷಕಗಳು ಅವಶ್ಯಕವಾಗಿರುತ್ತವೆ.

ಆಹಾರ ಭದ್ರತೆ ಎಂದರೆ ನಾವು ಸೇವಿಸುವ ಆಹಾರದ ಪ್ರಮಾಣ ಮಾತ್ರವಲ್ಲ, ಆ ಆಹಾರದ ಗುಣಮಟ್ಟ ಮತ್ತು ವೈವಿಧ್ಯತೆಯೂ ಆಗಿದೆ.

ಬೆಳೆಯ ಆರಂಭಿಕ ಹಂತದಲ್ಲಿ ಕಳೆಗಳಿಗೆ ಬೆಳೆಯಲು ಅವಕಾಶ ನೀಡಿದರೆ ಅವು ಸಮೃದ್ಧವಾಗಿ ಬೆಳವಣಿಗೆ ಹೊಂದಲು ಹೆಚ್ಚಿನ ಸಾಮರ್ಥ್ಯವನ್ನು ಹೊಂದಿರುತ್ತವೆ.

ಅವು ಮುಖ್ಯ ಬೆಳೆಯ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಕುಂಠಿತಗೊಳಿಸುವ ಸಾಮರ್ಥ್ಯವನ್ನೂ ಸಹ ಹೊಂದಿರುತ್ತವೆ.

ಕಳೆಗಳು ಆಹಾರ ಮತ್ತು ಇತರ ಸಂಪನ್ಮೂಲಗಳಾದ ಗಾಳಿ, ಸೂರ್ಯನ ಬೆಳಕು ಮತ್ತು ಸ್ಥಳಕ್ಕಾಗಿ ಮುಖ್ಯ ಬೆಳೆಯೊಂದಿಗೆ ಪೈಪೋಟಿ ನಡೆಸುತ್ತವೆ.

ಕಳೆಗಳು ಸೀಮಿತ ಜಾಗದಲ್ಲಿ ಬದುಕಲು ಪೈಪೋಟಿ ನಡೆಸುತ್ತವೆ, ಪ್ರತಿ ದಿನ ಎತ್ತರವಾಗಿ, ಬಲವಾಗಿ ಮತ್ತು ಆರೋಗ್ಯಕರವಾಗಿ ಬೆಳೆಯಲು ಮಣ್ಣಿನಿಂದ ಪೋಷಕಾಂಶಗಳನ್ನು ಹೀರಿಕೊಳ್ಳುತ್ತವೆ.

ಕಳೆಗಳು ಅವುಗಳ ಸ್ವಂತ ಬೆಳವಣಿಗೆ ಮತ್ತು ಅಭಿವೃದ್ಧಿ ಪ್ರಕ್ರಿಯೆಗಳಿಗೆ ಪೋಷಕಾಂಶಗಳನ್ನು ಹೀರಿಕೊಳ್ಳುತ್ತವೆ, ಕಳೆಗಳು ಮುಖ್ಯ ಬೆಳೆಗೆ ಲಭ್ಯವಿರುವ ಪೋಷಕಾಂಶಗಳ ಕಡಿಮೆ ಪಾಲನ್ನು ಮಾತ್ರ ಉಳಿಸುತ್ತವೆ, ಇದು ಇಳುವರಿ ಮತ್ತು ಉತ್ಪಾದನೆಯಲ್ಲಿ ಇಳಿಕೆಗೆ ಕಾರಣವಾಗುತ್ತದೆ ಹಾಗೂ ಹೆಚ್ಚಿನ ಉತ್ಪಾದನಾ ವೆಚ್ಚದೊಂದಿಗೆ ರೈತರ ಆದಾಯದ ಮೇಲೆ ಪರಿಣಾಮ ಬೀರುತ್ತದೆ.

60 ಪ್ರತಿಶತದಷ್ಟು ಇಳುವರಿಯು ಮಣ್ಣಿನ ಫಲವತ್ತತೆಯ ಮೇಲೆ ಅವಲಂಬಿತವಾಗಿದೆ ಎಂದು ಸಂಶೋಧನೆ ತೋರಿಸಿದೆ ಮತ್ತು ಬೆಳೆಗಳಿಂದ ಪೋಷಕಾಂಶಗಳನ್ನು ಕಸಿದುಕೊಳ್ಳುವ ಕಳೆಗಳು ಇಳುವರಿ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತವೆ.

ಗಮನಿಸಿ:

ಮುಂಗಾರು ಹಂಗಾಮಿನಲ್ಲಿ, ಮುಂಗಾರು ಮಳೆಗಳು ಹಾಗೂ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅನುಕೂಲಕರವಾದ ತಾಪಮಾನಗಳು ಇರುವುದರಿಂದ, ಇದು ಗರಿಷ್ಠ ಪ್ರಮಾಣದ ಕಳೆಗಳು ಹುಟ್ಟಿಕೊಳ್ಳುವ ಮುಖ್ಯ ಋತುವಾಗಿದೆ.

ಹೀಗಾಗಿ, ಹಿಂಗಾರು ಋತುವಿನ ಬೆಳೆಗಳಿಗೆ ಹೋಲಿಸಿದರೆ ಮುಂಗಾರು ಬೆಳೆಗಳು ಹೆಚ್ಚು ಪೈಪೋಟಿ ನಡೆಸಬೇಕಾಗುತ್ತದೆ.

ಮಳೆಗಾಲದಲ್ಲಿ ಬಿತ್ತನೆ ಮಾಡುವ ಬೆಳೆಗಳನ್ನು ಮುಂಗಾರು ಬೆಳೆಗಳು ಎಂದು ಕರೆಯಲಾಗುತ್ತದೆ.

ಉದಾಹರಣೆಗೆ, ಭತ್ತ, ಹತ್ತಿ, ಸೋಯಾ ಬೀನ್, ಮೆಕ್ಕೆಜೋಳ, ಇತ್ಯಾದಿ.

ಭತ್ತವು ನಮ್ಮ ದೇಶದ ಪ್ರಧಾನ ಬೆಳೆಯಾಗಿದೆ.

ಇಳುವರಿ ನಷ್ಟಕ್ಕೆ ಕಾರಣವಾಗುವ ಹಲವು ಅಂಶಗಳಲ್ಲಿ ಒಂದು ಕಳೆಗಳು.

ಭತ್ತದಲ್ಲಿ ಕಂಡುಬರುವ ಪ್ರಮುಖ ಕಳೆಗಳೆಂದರೆ ಜಿಗಳಿ, ಗರುಗಲು, ಇತ್ಯಾದಿ. ಬಿಳಿ ಚಿನ್ನ ಎಂದೂ ಕರೆಯಲ್ಪಡುವ ಹತ್ತಿಯಲ್ಲಿ ಕುಪ್ಪಿ ಗಿಡ, ಇಗಳಿ ಕಸ, ಮುಂತಾದ ಕಳೆಗಳು ಕಂಡುಬರುತ್ತವೆ. ವಾರ್ಷಿಕ ದ್ವಿದಳ ಧಾನ್ಯವಾದ ಸೋಯಾಬೀನ್, ಗೊರ್ಜಿ ಪಲ್ಯ, ನರಿಬಾಲ ಹುಲ್ಲು ಇತ್ಯಾದಿ ಅಗಲವಾದ ಎಲೆಗಳ ಕಳೆಗಳಿಗೆ ಹೆಚ್ಚು ಒಳಗಾಗುತ್ತದೆ. ಇವುಗಳ ಹೊರತಾಗಿ, ಈ ಎಲ್ಲಾ ಬೆಳೆಗಳ ಮೇಲೆ ಪರಿಣಾಮ ಬೀರುವ ಒಂದು ವಿಧದ ಕಳೆಯೆಂದರೆ ಜೇಕು ಜಾತಿಗೆ ಸೇರಿದ ಹುಲ್ಲುಗಳು (ಉದಾ, ಸೈಪರಸ್ ಸ್ಪೀಸಿಸ್).

ಕೃಷಿ ಸಲಹೆಗಾರರು ಈ ಕ್ಷೇತ್ರದಲ್ಲಿ ಪರಿಣತರಾಗಿದ್ದು, ರೈತರಿಗೆ ಕೃಷಿ ತಂತ್ರಗಳು, ಬೆಳೆ ಯೋಜನೆ, ಬೆಳೆಯ ಇಳುವರಿ, ಬೆಳೆ ಸಂರಕ್ಷಣಾ ವಿಧಾನಗಳು,ಇಳುವರಿ ನಷ್ಟದ ತಡೆಗಟ್ಟುವಿಕೆ ಇತ್ಯಾದಿಗಳ ಬಗ್ಗೆ ಅತ್ಯುತ್ತಮ ಮಾಹಿತಿಯನ್ನು ಒದಗಿಸಬಹುದು.

ಬೆಳೆ ಯೋಜನೆಯ ನಂತರ, ರೈತರು ಬೆಳೆಯ ಬೆಳವಣಿ ವಿವಿಧ ಹಂತಗಳಲ್ಲಿ ಅನೇಕ ಸವಾಲುಗಳನ್ನು ಎದುರಿಸುತ್ತಾರೆ, ಆದರೆ ಕೀಟಗಳು, ರೋಗಗಳು ಮತ್ತು ಕಳೆಗಳಿಂದ ಬೆಳೆಗಳನ್ನು ರಕ್ಷಿಸುವುದು ಇನ್ನೂ ಹೆಚ್ಚಿನ ಸಮಯ ಮತ್ತು ಶ್ರಮವನ್ನು ತೆಗೆದುಕೊಳ್ಳುವ ಮತ್ತೊಂದು ಸಮಸ್ಯೆಯಾಗಿದೆ.

ಪೋಷಕಾಂಶಗಳ ವೈಜ್ಞಾನಿಕ ನಿರ್ವಹಣೆಯು ಆರೋಗ್ಯಕರ ಬೆಳೆ ನಿರ್ವಹಣಾ ವಿಧಾನ ಮತ್ತು ಉತ್ತಮ ಇಳುವರಿಯನ್ನು ಸಕ್ರಿಯಗೊಳಿಸಬಹುದು.

ರೈತರು ಸಾಮಾನ್ಯವಾಗಿ ತಮ್ಮ ಸಮಸ್ಯೆಗಳನ್ನು ಪರಿಹರಿಸಲು ಸ್ಥಳೀಯ ಕೃಷಿ ಪರಿಕರಗಳ ವಿತರಕರು ಅಥವಾ ಸಹೋದ್ಯೋಗಿಗಳ ಸಹಾಯವನ್ನು ತೆಗೆದುಕೊಳ್ಳುತ್ತಾರೆ.

ರೈತರು ಕೃಷಿ ಸಲಹೆಗಾರರು ಅಥವಾ ಸರ್ಕಾರಿ ವಿಸ್ತರಣಾ ಸೇವೆಗಳಿಗೆ ಸೀಮಿತ ಸಂಪರ್ಕವನ್ನು ಹೊಂದಿದ್ದಾರೆ.

ಆದ್ದರಿಂದ ರಸಗೊಬ್ಬರ ನಿರ್ವಹಣೆಯು ನಿರ್ಣಾಯಕವಾಗಿದೆ ಮತ್ತು ಅವಶ್ಯಕತೆಗಳನ್ನು ಪೂರೈಸಲು ವೈಜ್ಞಾನಿಕ ವಿಧಾನವನ್ನು ಕೇಳುತ್ತದೆ.

ಮಹಿಂದ್ರಾ & ಮಹಿಂದ್ರಾರವರ ಕ್ರಿಶ್ -ಇ ಅಪ್ಲಿಕೇಶನ್ ರೈತರಿಗೆ ವೈಯಕ್ತಿಕ ಡಿಜಿಟಲ್ ಕೃಷಿ ಸಲಹೆಗಾರನಂತೆ ಕಾರ್ಯನಿರ್ವಹಿಸುತ್ತದೆ ಹಾಗೂ ಮಣ್ಣು ಮತ್ತು ಪೋಷಕಾಂಶಗಳ ನಿರ್ವಹಣೆ, ಕಳೆ, ನೀರಾವರಿ ಮತ್ತು ಕೀಟ ನಿರ್ವಹಣೆಯ ಜೊತೆಗೆ ಹವಾಮಾನ ಆಧಾರಿತ ಪ್ರಬಲ ಕೃಷಿ ಚಟುವಟಿಕೆಗಳಾದ ಭೂಮಿ ಸಿದ್ಧಗೊಳಿಸುವುದು, ಬೆಳೆಯ ವಿಧ ಮತ್ತು ಗಾತ್ರದ ಆಧಾರದಲ್ಲಿ ಬೆಳೆಗಳ ಕೊಯ್ಲು, ಹವಾಮಾನ ಪರಿಸ್ಥಿತಿ, ಮಣ್ಣು ಮತ್ತು ಬೀಜದ ವಿಧ, ನಾಟಿಮಾಡುವ ವಿಧಾನ, ರಸಗೊಬ್ಬರ ನಿರ್ವಹಣೆ ಇತ್ಯಾದಿಗಳ ಕುರಿತು ಸಲಹೆಗಳನ್ನು ಒದಗಿಸುತ್ತದೆ.

ಮಣ್ಣಿನ ಪೋಷಕಾಂಶಗಳ ನಿರ್ವಹಣೆಯು ಮಣ್ಣಿನ ಫಲವತ್ತತೆಯನ್ನು ಅವಲಂಬಿಸಿರುತ್ತದೆ.

ಮಣ್ಣಿನ ಫಲವತ್ತತೆ ಎಂದರೆ ಅತ್ಯುತ್ತಮ ಬೆಳೆ ಇಳುವರಿಗಾಗಿ ಸಸ್ಯಗಳ ಬೆಳವಣಿಗೆಯನ್ನು ಸ್ಥಿರವಾಗಿರಿಸುವ ಮತ್ತು ಪೋಷಕಾಂಶಗಳನ್ನು ಪೂರೈಸುವ ಮಣ್ಣಿನ ಸಾಮರ್ಥ್ಯ.

ಕೃಷಿ ವ್ಯವಸ್ಥೆಗಳಲ್ಲಿ ಆಹಾರ ಭದ್ರತೆ ಮತ್ತು ಪರಿಸರದ ಸುಸ್ಥಿರತೆಯನ್ನು ಮುನ್ನಡೆಸಲು ಸಮಗ್ರ ಮಣ್ಣಿನ ಫಲವತ್ತತೆ ನಿರ್ವಹಣಾ ವಿಧಾನದ ಅಗತ್ಯವಿದೆ, ಇದು ಸುಸ್ಥಿರ ರೀತಿಯಲ್ಲಿ ಬೆಳೆ ಉತ್ಪಾದನೆಯನ್ನು ಗರಿಷ್ಠಗೊಳಿಸುತ್ತದೆ ಹಾಗೂ ಮಣ್ಣಿನ ಭೌತಿಕ ಮತ್ತು ರಾಸಾಯನಿಕ ಗುಣಲಕ್ಷಣಗಳ ಕ್ಷೀಣಿಸುವಿಕೆಗೆ ಕಾರಣವಾಗುವ ಮಣ್ಣಿನ ಪೌಷ್ಟಿಕಾಂಶದ ನಿಕ್ಷೇಪಗಳ ದುರಪಯೋಗವನ್ನು ಕಡಿಮೆ ಮಾಡುತ್ತದೆ.

ಉದಾಹರಣೆಗೆ, ಹತ್ತಿಯಲ್ಲಿ ಪೋಷಕಾಂಶಗಳ ನಿರ್ವಹಣೆಯು ಸುಸ್ಥಿರ ಇಳುವರಿಯನ್ನು ಖಾತ್ರಿಪಡಿಸುವಲ್ಲಿ ಬಹಳ ಪ್ರಯೋಜನಕಾರಿಯಾಗಬಹುದು ಹಾಗೂ ಹತ್ತಿ ಉದ್ಯಮ ಮತ್ತು ಹತ್ತಿ ಕೃಷಿಯಲ್ಲಿ ತೊಡಗಿರುವ ಉದ್ಯೋಗಿಗಳು/ವ್ಯವಹಾರಗಳು ಮತ್ತು ಇತರ ಅಂಗಸಂಸ್ಥೆಗಳ ಪಾತ್ರಗಳ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ.

ಮಣ್ಣಿನ ಫಲವತ್ತತೆ ನಿರ್ವಹಣಾ ಅಭ್ಯಾಸಗಳು ರಸಗೊಬ್ಬರಗಳ ಬಳಕೆ, ಸಾವಯವ ಪರಿಕರಗಳು, ದ್ವಿದಳ ಧಾನ್ಯಗಳೊಂದಿಗೆ ಬೆಳೆ ಬದಲಾವಣೆ ಮತ್ತು ಸುಧಾರಿತ ಜರ್ಮ್‌ಪ್ಲಾಸಂನ ಬಳಕೆಯನ್ನು ಒಳಗೊಂಡಿರುತ್ತದೆ, ಇದರ ಜೊತೆಗೆ ಈ ಅಭ್ಯಾಸಗಳನ್ನು ಸ್ಥಳೀಯ ಪರಿಸ್ಥಿತಿಗಳಿಗೆ ಹೇಗೆ ಅಳವಡಿಸಿಕೊಳ್ಳುವುದು ಎಂಬ ಜ್ಞಾನವನ್ನು ಹೊಂದಿರಬೇಕಾಗುತ್ತದೆ.

ಕ್ರಿಶ್-ಇ ಕೇಂದ್ರಗಳು ಮಣ್ಣಿನ ಪರೀಕ್ಷೆಯನ್ನು ಆಧರಿಸಿದ ಪೋಷಕಾಂಶಗಳ ಸಲಹೆಯಿಂದ ಹಿಡಿದು ರೈತರಿಂದ ಅಳವಡಿಸಿಕೊಂಡ ತಾಂತ್ರಿಕ ಬೆಳೆ ಕ್ಷೇತ್ರದಲ್ಲಿ ಕೊಯ್ಲು ಮಾಡುವವರೆಗೆ ಬೆಳೆ ಬೆಳವಣಿಗೆಯ ಕುರಿತು ಸಲಹೆಯನ್ನು ನೀಡುವ ಮೂಲಕ ಪ್ರಮುಖ ಪಾತ್ರವನ್ನು ವಹಿಸುತ್ತವೆ.

ಪೋಷಕಾಂಶದ ಅವಶ್ಯಕತೆಗಳಂತಹ ಪ್ರತಿ ಹಂತದಲ್ಲಿ ಬೆಳೆಗಳನ್ನು ಪೂರ್ವಭಾವಿಯಾಗಿ ನಿರ್ವಹಿಸಲು ಕ್ರಿಶ್-ಇ ಅಪ್ಲಿಕೇಶನ್ ರೈತರಿಗೆ ಸಹಾಯ ಮಾಡುತ್ತದೆ, ಹಾಗೂ ಸಂಪೂರ್ಣ ಬೆಳವಣಿಗೆ ಮತ್ತು ಜೀವನ ಚಕ್ರಕ್ಕೆ ಅಗತ್ಯವಿರುವ ಪೋಷಣೆಯನ್ನು ಬೆಳೆಗಳು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಕಳೆಗಳನ್ನು ನಿರ್ಮೂಲನೆ ಮಾಡುವುದು ಉತ್ತಮ ಮಾರ್ಗವಾಗಿದೆ.

ಇದು ಪೋಷಕಾಂಶಗಳ ಬಳಕೆಯ ದಕ್ಷತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಹಾಗೂ ಇಳುವರಿ ಮತ್ತು ಬೆಳೆಗಳ ಇತರ ಪರಿಮಾಣಾತ್ಮಕ ಗುಣಲಕ್ಷಣಗಳ ಮೇಲೆ ನೇರ ಪರಿಣಾಮ ಬೀರುತ್ತದೆ.

ಪರಿಣಿತ ಕೃಷಿ ತಂತ್ರಜ್ಞರ ಸೇವೆಗಳ ಮೂಲಕ ಭಾರತೀಯ ಕೃಷಿಯನ್ನು ಪರಿವರ್ತಿಸಲು, ಕ್ರಿಶ್-ಇ ಪ್ರತಿಯೊಬ್ಬ ರೈತರಿಗೆ ತಮ್ಮ ಜಮೀನುಗಳಿಂದ ಹೆಚ್ಚಿನ ಇಳುವರಿಯನ್ನು ಪಡೆಯಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ.

ಕ್ರಿಶ್-ಇ ಡಿಜಿಟಲ್ ಕೃಷಿಯು ರೈತರ ಫೋನ್ ಅನ್ನು ಮಾಹಿತಿ ಮತ್ತು ವಿಶ್ವಾಸಾರ್ಹ ಸಲಹೆಯ ಪ್ರಪಂಚಕ್ಕೆ ಸಂಪರ್ಕಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತದೆ.

ನಮ್ಮ ನವೀನ ವೈಶಿಷ್ಟ್ಯ ಡಿಜಿಟಲ್ ಕೃಷಿ ಸೇವೆಗಳಿಗೆ ಮತ್ತು ಆಧುನಿಕ ಕೃಷಿಗೆ ಅಗತ್ಯವಿರುವ ಇತ್ತೀಚಿನ ಕೃಷಿ-ಜ್ಞಾನಕ್ಕೆ ಪ್ರವೇಶ ಪಡೆಯಲು ನಮ್ಮ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ.