ಕೈಲಾಸ್ ಮೋರೆ ಗ್ರಾಮ - ಪೂರಿ
ಜಿಲ್ಲೆ - ಔರಂಗಾಬಾದ್
ಓರ್ವ ಕೃಷ್-e ತಾಂತ್ರಿಕತೆ ಪ್ಲಾಟ್ ರೈತರಾಗಿರುವ ಶ್ರೀಯುತ ಕೈಲಾಶ್ ಮೋರೆ ಇವರು ಮಹಾರಾಷ್ಟ್ರ ರಾಜ್ಯದ ಔರಂಗಾಬಾದ್ ಜಿಲ್ಲೆಯವರಾಗಿದ್ದಾರೆ. 8 ತಿಂಗಳುಗಳ ಹಿಂದೆ, ತಮ್ಮ ಬೆಳೆಗಾಗಿ ಕೃಷ್-e ಕಬ್ಬು ಬೆಳೆಯ ಡಿಜಿಟಲ್ ಕ್ಯಾಲೆಂಡರ್ ಅನ್ನು ಅವರು ಅಳವಡಿಸಿಕೊಂಡರು. ಕೃಷ್-e ಸಲಹೆ ಮತ್ತು ಆ್ಯಪ್ ಸಪೋರ್ಟ್‌ನ ನೆರವಿನೊಂದಿಗೆ, ಪ್ರಸ್ತುತದಲ್ಲಿ, ಅವರ ಕಬ್ಬಿನ ಬೆಳೆಯು 7.5 ಅಂಗುಲಗಳಷ್ಟು ಗಿಣ್ಣುಗಳ ಗಾತ್ರವನ್ನು ಮತ್ತು 3.5 ಅಂಗುಲಗಳಷ್ಟು ದಪ್ಪವನ್ನು ಹೊಂದಿದೆ. ಇದರ ಶ್ರೇಯವು ಉತ್ತಮ ಬೆಳೆ ನಿರ್ವಹಣಾ ಕ್ರಮಗಳಾದಂತಹ ಭೂಮಿ ಸಿದ್ಧತೆ, ಬೀಜ ಆಯ್ಕೆ, ಬೀಜೋಪಚಾರ ಮುಂತಾದವುಗಳಿಗೆ ಸಲ್ಲುತ್ತದೆ, ಹಿಂದಿನ ವರ್ಷಕ್ಕೆ ಹೋಲಿಸಿದಲ್ಲಿ ಸಾಗುವಳಿ ವೆಚ್ಚದಲ್ಲಿ 12% ಉಳಿತಾಯವನ್ನು ಮಾಡಲು ಅವರಿಗೆ ಇದು ನೆರವಾಗಿದೆ.