ನಮ್ಮ ರೈತರ ಮುಕ್ತ ಮನಸ್ಕ ಪರಿಶ್ರಮ ಮತ್ತು ಒಲವಿನ ಮೇಲೆ ನಿರ್ಮಾಣಗೊಂಡಿರುವ, ಭಾರತದಲ್ಲಿನ ಕೃಷಿಯು ಒಂದು ಪ್ರಧಾನವಾದ ವೃತ್ತಿಯಾಗಿದೆ ಹಾಗೂ ಪೂರ್ವಿಕರ ಪರಂಪರೆಯೂ ಸಹ ಆಗಿದೆ. 1960 ರ ʼಹಸಿರು ಕ್ರಾಂತಿʼ ಯು, ಆಧುನಿಕ ಯಾಂತ್ರಿಕತೆ ಮತ್ತು ವೈಜ್ಞಾನಿಕವಾಗಿ ಶ್ರೇಷ್ಠವಾದ ಬೆಳೆ ಪರಿಕರಗಳೊಂದಿಗೆ ಕೃಷಿ ಕ್ಷೇತ್ರದ ಉತ್ಪಾದಕತೆಯನ್ನು ಹೆಚ್ಚಿಸುವ ಪ್ರಥಮ ಪ್ರಯತ್ನವಾಗಿತ್ತು. ರೈತರು ಪ್ರಗತಿಯನ್ನು ಹೊಂದಿದರು ಹಾಗೂ ಭಾರತವು ಪ್ರಮುಖ ಬೆಳೆಗಳಲ್ಲಿ ಸ್ವಾವಲಂಬನೆಯನ್ನು ಸಾಧಿಸಿತು. 1970 ರ ಯುಗ ಅಂದರೆ, ʼಕ್ಷೀರ ಕ್ರಾಂತಿʼ ಯು ರೈತರ ಬೆಳವಣಿಗೆಯನ್ನು ಇನ್ನಷ್ಟು ವೃದ್ಧಿಸಿತು ಹಾಗೂ ಡೈರಿ ಕ್ಷೇತ್ರದಲ್ಲಿ ಹಿಂದುಳಿದ ದೇಶ ಎಂಬ ಹಣೆಪಟ್ಟಿಯನ್ನು ಕಳಚಿಕೊಂಡು ಜಗತ್ತಿನ ಅತಿದೊಡ್ಡ ಹಾಲು ಉತ್ಪಾದಕ ದೇಶ ಎಂಬುದಾಗಿ ಕರೆಯಲ್ಪಡುವಂತೆ ಭಾರತವನ್ನು ರೂಪಾಂತರಗೊಳಿಸಿತು. ಅದು ಭಾರತವನ್ನು ಡೈರಿ ಕ್ಷೇತ್ರದಲ್ಲಿನ ಅತಿದೊಡ್ಡ ಸ್ವಾವಲಂಬಿ ಹಾಗೂ ಗ್ರಾಮೀಣ ಉದ್ಯೋಗ ಉತ್ಪಾದಕವನ್ನಾಗಿಸಿತು.
ಇಂದು, ತನ್ನ ಸೇವೆಯಲ್ಲಿರುವ ಅತಿದೊಡ್ಡ ರೈತ ಸಮುದಾಯದೊಂದಿಗೆ ಹಾಗೂ ಪ್ರಪಂಚದಲ್ಲಿಯೇ 2ನೇ ಅತಿಹೆಚ್ಚು ವಿಸ್ತೀರ್ಣದ ಕೃಷಿಯೋಗ್ಯ ಭೂಮಿಯನ್ನು ಹೊಂದಿರುವ ಹೆಗ್ಗಳಿಕೆಯೊಂದಿಗೆ, ವಿಶ್ವದ ಅತಿದೊಡ್ಡ ಆಹಾರ ಉತ್ಪಾದಕರಲ್ಲಿ ಭಾರತವು ಒಂದಾಗಿದೆ ಮತ್ತು ಮಗದೊಮ್ಮೆ ಹೊಸ ಯುಗವೊಂದರ ಅಂಚಿನಲ್ಲಿದೆ.
ಇಂದು, ಭಾರತೀಯ ರೈತರು ಮತ್ತು ಭಾರತೀಯ ಕೃಷಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಒಂದು ದೊಡ್ಡ ಹೆಜ್ಜೆಯಾದ, 2020 ರ ʼಡಿಜಿಟಲ್ ಕ್ರಾಂತಿʼಯ ಉದಯವನ್ನು ಕೃಷ್-e ಅನಾವರಣಗೊಳಿಸುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನದೊಂದಿಗೆ ಪ್ರತಿಯೊಂದು ಹೊಲವನ್ನು ರೂಪಾಂತರಗೊಳಿಸುವ, ಉತ್ಪಾದಕತೆಯನ್ನು, ಮತ್ತು ಆಮೂಲಕ ರೈತರ ಆದಾಯವನ್ನು ವರ್ಧಿಸುವ ಶಕ್ತಿಯನ್ನು ಕೃಷ್-e ಹೊಂದಿದೆ. ಇದನ್ನು ‘ಕೃಷ್-e ಯ ಡಿಜಿಟಲ್ ಉಷ:ಕಾಲ’ ಎಂದು ನಾವು ಕರೆಯುತ್ತೇವೆ.